Apr 7, 2009

ವಿಜಯ ಕರ್ನಾಟಕದ ಹೊಗಳು ಭಟ್ಟರು

ಕಳೆದ ಮೂರು ವಾರಗಳಿಂದ ಕರ್ನಾಟಕದ ಸುಮಾರು ಅರ್ಧ ಜಿಲ್ಲೆಗಳಲ್ಲಿ ಸುತ್ತಿದ ದೈಹಿಕ ಆಯಾಸ ಇನ್ನೂ ಹೋಗಿಲ್ಲ. ಅದರ ಜೊತೆಗೆ ಜೆಟ್ ಲ್ಯಾಗ್ ಸಮಸ್ಯೆ. ನಾಳೆ ಮತ್ತೆ ಪ್ರಯಾಣ ಹೊರಡಬೇಕಿದೆ, ಮೂರು ದಿನದ ಮಟ್ಟಿಗೆ. ವಾರಾಂತ್ಯದವರೆಗೆ ಮತ್ತೆ ಬಿಡುವಿಲ್ಲ.

ಕಳೆದ ಎರಡು ಭಾನುವಾರಗಳಲ್ಲೂ ವಿಜಯ ಕರ್ನಾಟಕದಲ್ಲಿ ನನ್ನನ್ನು ಹೊಗಳಿ ಬರೆದಿದ್ದರು. ಹೊಗಳುವುದು ಅಂದರೆ ಗೊತ್ತಲ್ಲ; ಸುಳ್ಳು ಮತ್ತು ಉತ್ಪ್ರೇಕ್ಷೆ ಸಹಜ. ಅದರ ಜೊತೆಗೆ "ನೂರೆಂಟು ಸುಳ್ಳು" ಸೇರಿಕೊಂಡರೆ ಇನ್ನೂ ಭರ್ಜರಿಯಾಗಿರುತ್ತದೆ. ಇಂತಹುದೊಂದು ಹೊಗಳಿಕೆಗಳಿಗೆ ಸಾರ್ವಜನಿಕವಾಗಿ ಸಕ್ರಿಯರಾಗಿರುವವರು ಸದಾ ಸಿದ್ಧರಾಗಿರಬೇಕಾಗುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ, ಹೊಗಳಿಕೆ ತಡವಾಯಿತು. ಅದೂ ಕನಿಷ್ಠ ಒಂದು ವಾರ. ನಾಲ್ಕು ವಾರಗಳ ಹಿಂದಿನ ನನ್ನ "ಜಾತಿಅಹಂ, ಸ್ಪೃಶ್ಯ/ಅಸ್ಪೃಶ್ಯ, ನಿಜವಾಗಿ ’ಹಿಂದುಳಿದವರು’, ಒಳಮೀಸಲಾತಿ, ’ಅನಂತ ನಿಷ್ಠ’ ಭಟ್..." ಲೇಖನದಲ್ಲಿ ಇದ್ದಿರಬಹುದಾದ "ಸುಳ್ಳು ಅಥವ ಸತ್ಯ" ಈ ದಿಢೀರ್ ಹೊಗಳಿಕೆಗೆ ಕಾರಣ. ಆ ಲೇಖನವನ್ನು ಓದಿದ್ದ ಎಲ್ಲರಿಗೂ ಇದು ಗೊತ್ತು.

ಭಟ್ಟಂಗಿಗಳ ಈ ಹೊಗಳು ಪತ್ರಗಳು ನನಗೆ ಮುಂದಕ್ಕೆ ಹಲವಾರು ಕಾರಣಗಳಿಗೆ ಬೇಕಾಗಿರುವುದರಿಂದ ಅವನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಬೇಕೆಂದಾಗ ಹುಡುಕಿಕೊಳ್ಳಲು ಸುಲಭವಾಗುತ್ತದೆ.

ಮಾರ್ಚ್ 29, 2009 ರ ವಿಜಯ ಕರ್ನಾಟಕದಲ್ಲಿ:


ಏಪ್ರಿಲ್ 05, 2009 ರ ವಿಜಯ ಕರ್ನಾಟಕದಲ್ಲಿ:


ಇಲ್ಲಿ "ಬಲಿಪಶು"ವಾದ ಜಗದೀಶ್ ರಾವ್ ಕಲ್ಮನೆ ಯಾರು ಎಂದು ನನಗೆ ಗೊತ್ತಿಲ್ಲ. ಅವರಿಂದ ಕೆಲವು "ಸುಳ್ಳು ಮತ್ತು ನಿಜ"ವನ್ನು ತಿಳಿದುಕೊಳ್ಳುವ ಮನಸ್ಸಿದೆ. ಗೊತ್ತಿದ್ದವರು ಅವರ ವಿವರ ಕಳುಹಿಸಿದರೆ ಸಂತೋಷ. ಅಥವ ಅವರೆ ಇದನ್ನು ಓದಿ ನನ್ನನ್ನು ಸಂಪರ್ಕಿಸಿದರೆ ಇನ್ನೂ ಸಂತೋಷ. ನನ್ನ ಫೋನ್ ಸಂಖ್ಯೆ ಆಗಲಿ ಇಮೇಯ್ಲ್ ಆಗಲಿ ಹುಡುಕಿಕೊಳ್ಳುವುದು ಕಷ್ಟವಲ್ಲ.

ನಿರಂಕುಶಮತಿ ಓದುಗರಿಗೆ ಸತ್ಯ ಏನೆಂದು ಗೊತ್ತು. ಹಾಗಾಗಿ ಈ ವಿಷಯದ ಬಗ್ಗೆ ನನ್ನ ಪ್ರತಿಕ್ರಿಯೆ ಇಲ್ಲ. ಅದರ ಅಗತ್ಯವಾಗಲಿ, ಅದಕ್ಕೆ ಅವಸರವಾಗಲಿ ಇಲ್ಲ. ಒಂದಿಬ್ಬರು ಸ್ನೇಹಿತರಿಗೆ ಹೇಳಿದ್ದನ್ನೆ ಇಲ್ಲಿ ಸದ್ಯಕ್ಕೆ ಬರೆಯುತ್ತೇನೆ: "ನನ್ನ ಮುಂದೆ ಏನಿಲ್ಲವೆಂದರೂ ಇನ್ನೂ 40 ವರ್ಷಗಳ ಸುದೀರ್ಘ ಸಕ್ರಿಯ ಜೀವನವಿದೆ. ನನಗೆ ಯಾವುದೆ ಅಸಹಜವಾದ ಸಾವು ಬರದೆ ಇದ್ದರೆ ಮತ್ತು ನನ್ನ ಆರೋಗ್ಯ ಸರಿಯಾಗಿ ನೋಡಿಕೊಂಡರೆ ಈ ಹೊಗಳುಭಟ್ಟರಿಗಿಂತ ಕನಿಷ್ಟ 25 ವರ್ಷ ಹೆಚ್ಚು ಬದುಕುತ್ತೇನೆ. ಭವಿಷ್ಯ ಯಾರನ್ನು ಎಲ್ಲಿ ಇಡುತ್ತದೆ ಎಂದು ನೋಡುವ ಅವಕಾಶ ಇರುವುದು ನನಗೆ ಮಾತ್ರ. The last laugh will be mine."

ರವಿ...
www.ravikrishnareddy.com

5 comments:

Anonymous said...

ಅಂಗಂದ್ರೆ ನಮ್ಮ್ ಭಟ್ರು ಇನ್ನು ಅದಿನೈದೇ ವರ್ಸ ಬದುಕ್ತಾರೆ ಅಂತ ಆಯ್ತು. ಸರೀನಪ್ಪ....

ಶರತ್ ಚಂದ್ರ said...

ನಿಮ್ಮ ಮೇಲಿನ ಈ ತರಹದ ದಾಳಿ ನಿರೀಕ್ಷಿತವೇ..!!
ಇವೆಲ್ಲ ಅವರ ಹಾಗೂ ಅವರ ಗುರು - ಶಿಷ್ಯರ ಸಮೂಹ ದ ಎಂದಿನ ವರಸೆಯೇ..
ಆದರೆ ಆತ ಇಷ್ಟು ಕೀಳು ಮಟ್ಟಕ್ಕೆ ಇಳಿಯಬಾರದಾಗಿತ್ತು..

ಪ್ರದೀಪ said...

ಆ ಕಲ್ಮನೆ ಇದಾರೋ ಇಲ್ವೋ ಅದಕ್ಕಿಂತ ಇಲ್ಲಿ ರವಿರೆಡ್ಡಿಯವರನ್ನು ’ಲೂಸ್ ಪಾರ್ಟಿ’ ಅಂತ ಪತ್ರಿಕೆಯ ಸಂಪಾದಕನೊಬ್ಬ ಗಂಭೀರ ಆರೋಪ ಹೊರಿಸಿರುವಾಗ ಇದರ ಸತ್ಯಾಸತ್ಯತೆಯನು ಪರಿಶೀಲಿಸಲೇ ಬೇಕಾಗಿದೆ.

ಇಲ್ಲಿಯೂ
ಕೂಡ ನಿಮ್ಮ ಜಗಳದ ಬಗ್ಗೆ ಒಂದಿಷ್ಟು ಬರೆಯಲಾಗಿದೆ ನೋಡಿ.

Anonymous said...

ಮಾಧ್ಯಮ ಮಿತ್ರರ ಕೋಳಿ ಜಗಳ ನೋಡೋ ಬಾರಾ: ವಿಶ್ವೇಶ್ವರ ಭಟ್ vs ರವಿಕೃಷ್ಣಾ ರೆಡ್ಡಿ!

Anonymous said...

kshakirana anno blogina nijavaada owner yaaru gotte? antaha pratibhe prataapa bhattara no1 shishyanigallade inyaarigide?