Feb 22, 2010

K.R. ಶ್ರೀಧರ್, ಬ್ಲೂಮ್‌ಬಾಕ್ಸ್, ಸಗಣಿ, ಹಳ್ಳಿಯಲ್ಲಿಯೆ ವಿದ್ಯುತ್...

K.R. ಶ್ರೀಧರ್ ಮತ್ತು ಬ್ಲೂಮ್‌ಬಾಕ್ಸ್, ಈ ಎರಡು ಹೆಸರುಗಳು ಮುಂದಿನ ದಿನಗಳಲ್ಲಿ ನಿಮಗೆ ಆಗಾಗ ಕಿವಿಗೆ ಬೀಳಬಹುದು; Clean, Green, ಮತ್ತು Cheap Energy ನಿಮ್ಮ ಆಸಕ್ತಿಯ ವಿಷಯಗಳಲ್ಲಿ ಒಂದಾಗಿದ್ದರೆ. ಕೆಳಗಿನ ವಿಡಿಯೊ ನೋಡಿ.



ಈ ತಂತ್ರಜ್ಞಾನದ ಪರ-ವಿರುದ್ಧದ ವಾದಗಳನ್ನು ಓದಲು ಈ ಕೆಳಗಿನ ಲಿಂಕ್‌ನಲ್ಲಿರುವ ಕಾಮೆಂಟ್ಸ್ ವಿಭಾಗಕ್ಕೆ ಹೋಗಿ:
http://news.cnet.com/8301-11128_3-10457410-54.html

ಈ ತಂತ್ರಜ್ಞಾನ ಮತ್ತಷ್ಟು mature ಆದಮೇಲೆ ಮತ್ತು mass production ಆರಂಭವಾದ ಮೇಲೆ ಈ generatorಗಳು ಇನ್ನೂ ಅಗ್ಗವಾಗಬಹುದು. ಬಹುಶಃ ಹತ್ತು-ಹದಿನೈದು ಲಕ್ಷಕ್ಕೆಲ್ಲ ನಮ್ಮ ಹಳ್ಳಿಗಳು ಗ್ರಿಡ್‌ನ ಸಹಾಯವಿಲ್ಲದೆ ತಮ್ಮದೆ ಊರಿನಲ್ಲಿ ವಿದ್ಯುತ್ ಉತ್ಪಾದಿಸಿಕೊಳ್ಳಬಹುದು. Biomass ಇಂಧನವನ್ನೂ ಬಳಸಬಹುದು ಎಂದು ಹೇಳುತ್ತಿರುವುದರಿಂದ ಸಗಣಿಯ ಗೋಬರ್ ಗ್ಯಾಸ್ ಯಾಕಾಗುವುದಿಲ್ಲ? ಹಾಗೇನಾದರೂ ಆದರೆ, ಹಳ್ಳಿಗಳು ವಿದ್ಯುತ್‌ನ ವಿಚಾರದಲ್ಲಿ ಪೂರ್ಣವಾಗಿ ಸ್ವಾವಲಂಬಿಯಾಗಬಹುದು (ಜನರೇಟರ್‌ನ ಹೊರತಾಗಿ). ಗೋಬರ್ ಗ್ಯಾಸ್ ಇಲ್ಲದ ಕಡೆ ಮತ್ತು ಪಟ್ಟಣಗಳಲ್ಲಿ CNG/LPG ಬಳಸಬಹುದು. ನಾನಂತೂ ಇದನ್ನು ನೋಡಿದ ಸಮಯದಿಂದ excite ಆಗಿದ್ದೇನೆ. ಮುಂದಿನ ಒಂದೆರಡು ವರ್ಷಗಳಲ್ಲಿ ಇಂತಹುದೆ ಹೊಸಹೊಸ ತಂತ್ರಜ್ಞಾನಗಳನ್ನು ನಾವು ನೋಡಲಿದ್ದೇವೆ. ಕೊನೆಗೆ ಯಾವುದು ಯಶಸ್ವಿಯಾಗಲಿದೆಯೊ ನೋಡಬೇಕು.

No comments: