ಸ್ನೇಹಿತರೆ,
"ಏನೇ ಆಗಲಿ ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ", ಮತ್ತು "ದೇಶ-ಕಾಲ-ಶ್ರಮ," ಎಂಬ ನನ್ನ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಇದೇ ಭಾನುವಾರದಂದು (19/6/11) ಬೆಳಗ್ಗೆ 10:30 ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಇಟ್ಟುಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಕವಿಗೋಷ್ಠಿಯನ್ನು ಸಹ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ತಮ್ಮನ್ನು ಈ ಮೂಲಕ ಆಹ್ವಾನಿಸುತಿದ್ದೇನೆ.
"ಏನೇ ಆಗಲಿ ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ," ಇಂಗ್ಲಿಷ್‍ನ "Anyway" ಕೃತಿಯ ಅನುವಾದ. ಮೂಲ ಲೇಖಕರು ಕೆಂಟ್ ಎಂ. ಕೀತ್. "ದೇಶ-ಕಾಲ-ಶ್ರಮ" ನಾನು "Outliers" ಬಗ್ಗೆ ಬರೆದಿದ್ದ ಲೇಖನಗಳ ಸಂಗ್ರಹರೂಪ.
ಅಂದು ವೇದಿಕೆಯಲ್ಲಿ ನಟರಾಜ್ ಹುಳಿಯಾರ್, ಪೃಥ್ವಿ ದತ್ತ ಚಂದ್ರ ಶೋಭಿ, ಮತ್ತು ವಿ.ಪಿ. ನಿರಂಜನಾರಾಧ್ಯರಿರುತ್ತಾರೆ. ಪುಸ್ತಕ ಬಿಡುಗಡೆಯ ನಂತರದ ಕವಿಗೋಷ್ಠಿಯಲ್ಲಿ ಮಂಜುನಾಥ ವಿ. ಎಂ., ಕಾರ್ಪೆಂಟರ್, ಕುಮಾರ್ ಎಸ್., ಜಯಶಂಕರ್ ಹಲಗೂರು, ರಶ್ಮಿ ಹೆಗಡೆ, ಸಿ. ರವಿಂದ್ರನಾಥ್, ಸುಜಾತಾ ಕುಮಟಾ, ಶಿವಸುಂದರ್, ನಾಗತಿಹಳ್ಳಿ ರಮೇಶ್, ದಿನೇಶ್ ಕುಮಾರ್, ಬಾಲ ಗುರುಮೂರ್ತಿ, ಮತ್ತು ಚೀಮನಹಳ್ಳಿ ರಮೇಶ್ ಬಾಬು ತಮ್ಮ ಕವನಗಳನ್ನು ಓದಲಿದ್ದಾರೆ.
ಮತ್ತೊಮ್ಮೆ ತಮ್ಮನ್ನು ಆಹ್ವಾನಿಸುತ್ತ,
ಪ್ರೀತಿಯಿಂದ,
ರವಿ ಕೃಷ್ಣಾ ರೆಡ್ಡಿ
೯೬೮೬೦-೮೦೦೦೫

No comments:
Post a Comment