ಸ್ನೇಹಿತರೆ,
ನಾವು ಒಂದಿಷ್ಟು ಸಮಾನಮನಸ್ಕರು (ಸುಜಾತ ಕುಮಟ, ಸೂರ್ಯ ಮುಕುಂದರಾಜ್, ಶಾಂತವೇರಿ ರಾಮಮನೋಹರ್, ಮುಕುಂದರಾಜ್, ನಾನು, ಮತ್ತು ಇನ್ನೂ ಹಲವರು) "ಕರ್ನಾಟಕ ಪ್ರಜಾ ಮಂಡಲ" ಎಂಬ ವೇದಿಕೆಯೊಂದನ್ನು ಹುಟ್ಟುಹಾಕಿದ್ದೇವೆ. (ಇದರ ಹುಟ್ಟು ಹೇಗಾಯಿತು ಎಂದು ಮುಂದೊಮ್ಮೆ ಬರೆಯುತ್ತೇನೆ.) ಈ ಸಂಘಟನೆಯ ಮೂಲ ಉದ್ದೇಶ, ’ಕರ್ನಾಟಕದ ಸಮಾಜ, ಸಂಸ್ಕೃತಿ, ಮತ್ತು ರಾಜಕೀಯ ಕ್ಷೇತ್ರದಲ್ಲಿನ ಸುಧಾರಣೆಗಳಿಗಾಗಿ’ ಕಾರ್ಯಕ್ರಮಗಳನ್ನು ರೂಪಿಸುವುದು. ಕರ್ನಾಟಕ ರಾಜಕಾರಣದ ಇತ್ತೀಚಿನ ಕ್ಷುದ್ರ ಪ್ರಹಸನವಾದ ಆಣೆ-ಪ್ರಮಾಣದ ವಿರುದ್ಧವಾಗಿ "ಸಂವಿಧಾನದ ಮೇಲಾಣೆ" ಎಂಬ ಪ್ರತಿಭಟನಾ ಕಾರ್ಯಕ್ರಮ (27/6/2011)ಮಾಡುವುದರ ಮೂಲಕ ನಾವು ಮೊದಲು ಮಾಡಿದ್ದೇವೆ. ಅಂದು ನಮ್ಮ ಜೊತೆಗೆ ಹಲವಾರು ಹಿರಿಯರು, ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಬೆಂಗಳೂರಿನ ಪುರಭವನದ ಮೆಟ್ಟಿಲುಗಳ ಮೇಲೆ ನಡೆದ ಅದು ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿತ್ತು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಮತ್ತು ನ್ಯಾಯಾಲಯದಿಂದ ತೀರ್ಮಾನವಾಗಬೇಕಾದದ್ದನ್ನು ದೇವಸ್ಥಾನವೊಂದರಲ್ಲಿ ಆಣೆ-ಪ್ರಮಾಣ ಮಾಡಿಕೊಳ್ಳುವುದರ ಮೂಲಕ ತೀರ್ಮಾನಿಸಿಕೊಳ್ಳಲು ಬಯಸುವ ಮೂಢ-ಅವೈಚಾರಿಕ-ಅಪ್ರಬುದ್ಧ ನಡವಳಿಕೆಯ ವಿರುದ್ಧ ಘೋಷಣೆ ಕೂಗಿ, ಒಂದಷ್ಟು ಒಳ್ಳೆಯ ಕವನಗಳನ್ನು ಹಾಡಿ, ಕೆಲವು ಕವಿಗಳು ಕವನವನ್ನು ವಾಚಿಸಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು. ಅದರ ಕುರಿತ ಚಿತ್ರಗಳು, ಪತ್ರಿಕಾ ವರದಿಗಳ ಕ್ಲಿಪ್ಪಿಂಗ್‌ಗಳು ಇಲ್ಲಿವೆ. ನೀವು ಮುಂದಿನ ದಿನಗಳಲ್ಲಿ ನಮ್ಮೊಡನೆ ಕೈಜೋಡಿಸುವ ಆಸಕ್ತಿಯಿದ್ದಲ್ಲಿ (ದಯವಿಟ್ಟು ಜೊತೆಗೂಡಿ ಎಂದು ಕೇಳಿಕೊಳ್ಳುತ್ತೇನೆ) ದಯವಿಟ್ಟು ಮೇಲೆ ಹೆಸರಿಸಿದ ಯಾರನ್ನಾದರೂ ಸರಿ ಸಂಪರ್ಕಿಸಿ. (ನನ್ನ ದೂರವಾಣಿ ಸಂಖ್ಯೆ: ೯೬೮೬೦೮೦೦೦೫)
ಉದಯವಾಣಿಯಲ್ಲಿ:
ಪ್ರಜಾವಾಣಿಯಲ್ಲಿ:
ವಿಜಯ ಕರ್ನಾಟಕದಲ್ಲಿ:
ಕನ್ನಡಪ್ರಭದಲ್ಲಿ:
ಚಿತ್ರ-ವರದಿ ಕೃಪೆ: ಮೇಲೆ ಹೆಸರಿಸಿರುವ ಪತ್ರಿಕೆಗಳದು.
Jun 28, 2011
ಕರ್ನಾಟಕ ಪ್ರಜಾ ಮಂಡಲ - ಸಂವಿಧಾನದ ಮೇಲಾಣೆ
Subscribe to:
Post Comments (Atom)
No comments:
Post a Comment