May 22, 2008
ನನ್ನ ತಲೆಮಾರಿನ ತಲ್ಲಣಗಳು ಮತ್ತು ರಿವಾಲ್ವರ್‌ನಲ್ಲಿಯ ಬುಲೆಟ್
ನಾನು ಚುನಾವಣೆಗೆ ಸ್ಪರ್ಧಿಸುವುದಾಗಿ ಪ್ರಕಟಿಸಿದ ನಂತರ ಬಂದ ಬಹುಪಾಲು ಅಭಿಪ್ರಾಯಗಳನ್ನು ಇತ್ತೀಚೆಗೆ ತಾನೆ ವೆಬ್‍ಸೈಟಿನಲ್ಲಿ ಹಾಕಿದ್ದೇನೆ. ಭಾರತದ ನನ್ನ ತಲೆಮಾರಿನ ತಲ್ಲಣ, ಆಶಾವಾದ, ಕನಸುಗಳು, ಆದರ್ಶಗಳು, ಸಿನಿಕತೆ, ಎಲ್ಲವೂ ಇಲ್ಲಿವೆ.
http://www.ravikrishnareddy.com/feedback.html
ಇದು ಪಯಣದ ಆರಂಭ. ಜೀವನ ಸಾರ್ಥಕ್ಯದ ಕ್ಷಣಗಳು ಈಗ ಆರಂಭವಾಗಿದೆ. ಒಂದಿಡೀ ತಿಂಗಳು ಮನಸ್ಸು ಎಲ್ಲಾ ತರಹದ ಗೊಂದಲ, ಗೊಜಲು, ಆಮಿಷ, ಒತ್ತಡ, ಮಮಕಾರ, ಆಸೆ, ಆಕಾಂಕ್ಷೆ, ಭಯಗಳಿಂದ ಮುಕ್ತವಾಗಿತ್ತು. ಬಹುಶಃ ಮೊದಲ ಬಾರಿಗೆ ಅನುಭವಿಸಿದ ಆತ್ಮತೃಪ್ತಿಯ ದಿನಗಳು ಅವು. ಸಂಪೂರ್ಣ ಆದರ್ಶದಲ್ಲಿ ನಡೆದುಕೊಂಡ ಕಾಲ. ಎಲ್ಲಿಯೂ ರಾಜಿಯಾಗಲಿಲ್ಲ. ಆತ್ಮಸಾಕ್ಷಿಗೊಪ್ಪದ್ದನ್ನು ಹೇಳಲಿಲ್ಲ, ಮಾಡಲಿಲ್ಲ.
ಇನ್ನೆರಡು ದಿನದಲ್ಲಿ ಕರ್ನಾಟಕದ ಚುನಾವಣಾ ಫಲಿತಾಂಶ ಬರಲಿದೆ. ಹತ್ತು ಲಕ್ಷದ ಮಿತಿಯೊಳಗೆ, ಕಾನೂನುಬದ್ಧವಾಗಿ ಚುನಾವಣೆ ನಡೆಸಿದ ಯಾರೊಬ್ಬರೂ ಗೆಲ್ಲುವ ಸೂಚನೆಗಳು ಇಲ್ಲ. ಕೆಲವು 'ಅತಿ ಬುದ್ಧಿವಂತರು' ಚುನಾವಣಾ ಆಯೋಗ ಅಭೂತಪೂರ್ವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬ ಅಲ್ಪಬುದ್ಧಿಗೆ, ಅಲ್ಪತೃಪ್ತಿಗೆ ಶರಣಾಗಿದ್ದಾರೆ. ಆದರೆ, ಕಾನೂನು ಜಾರಿ ಮಾಡಲಾಗದ ಚುನಾವಣಾ ಆಯೋಗವೆ ಈ ಕೆಟ್ಟ ರಾಜಕೀಯ ವ್ಯವಸ್ಥೆಯ ಮಹಾಪೋಷಕ. ಒಳ್ಳೆಯದಕ್ಕೆ ಬದಲಾಗುತ್ತಿರುವ ಮತ್ತು ಬಲವಾಗುತ್ತಿರುವ ಭಾರತದ ಕಾನೂನು ವ್ಯವಸ್ಥೆಯ ಪರ ನಾನೂ ಇದ್ದೇನೆ ಎಂಬ ಹುಸಿ ನಟನೆ ಆಯೋಗದ್ದು. ಅಭ್ಯರ್ಥಿಗಳು ಕೋಟಿಕೋಟಿ ಖರ್ಚು ಮಾಡಿ ಕೇವಲ ಒಂದೆರಡು ಲಕ್ಷಗಳ ಲೆಕ್ಕ ತೋರಿಸಿದರೂ ಆಯೋಗ ಕಣ್ಣುಮುಚ್ಚಿಕೊಂಡು ಒಪ್ಪಿಕೊಳ್ಳುತ್ತದೆ ಎಂದರೆ, ಇದೊಂದು ಪ್ರಜಾಪ್ರಭುತ್ವ ಪರವಿಲ್ಲದ, ಕಾನೂನನ್ನು ಬಿಗಿಯಾಗಿ ಜಾರಿಗೊಳಿಸಲಾಗದ ಅಧಿಕಾರಿಗಳ ಕೂಟ. ಇದು ಬದಲಾಗಬೇಕು. ಆದರೆ ಇದನ್ನು ಸಾಧಿಸುವುದು ಹೇಗೆ?
ಇನ್ನು ಎರಡು ದಿನದಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶವೂ ಬರುವ ಸಾಧ್ಯತೆಗಳಿವೆ. ನಾನು ಚುನಾವಣಾ ಅಯೋಗಕ್ಕೆ ಕೊಟ್ಟಿರುವ ದೂರಿಗೆ ಇನ್ನೂ ಉತ್ತರ ಬಂದಿಲ್ಲ ಮತ್ತು ಅವರು ಮುಂದಕ್ಕೆ ಏನು ಮಾಡಲಿದ್ದಾರೆ ಎನ್ನುವ ಬಗ್ಗೆಯೂ ಗೊತ್ತಾಗುತ್ತಿಲ್ಲ. "ಮತಎಣಿಕೆ ಪ್ರಕ್ರಿಯೆಗೆ ಸ್ಟೇ ಆರ್ಡರ್ ತರಲು ಆಗುವುದಿಲ್ಲ, ಯಾವುದಕ್ಕೂ ಫಲಿತಾಂಶ ಬರುವ ತನಕ ಕಾಯಬೇಕು," ಎಂದು ವಕೀಲರು ಹೇಳುತ್ತಿದ್ದಾರೆ. ಕೇಸು ಹಾಕಲು ಕೆಲವು ದಾಖಲೆಗಳು ಬೇಕಾಗಿವೆ. ಆಯೋಗ ನಮಗೆ ಒದಗಿಸಬೇಕಾದ ದಾಖಲೆಗಳನ್ನು ಇನ್ನೂ ಒದಗಿಸಿಲ್ಲ. ಏನೇ ಇರಲಿ, ಒಂದು ಸುದೀರ್ಘವಾದ ಕಾನೂನು ಸಮರಕ್ಕೆ ಎಲ್ಲಾ ಸಜ್ಜಾಗುತ್ತಿದೆ. ಸದ್ಯದ ಗುರಿ, "ಜಯನಗರ ಕ್ಷೇತ್ರದಲ್ಲಿ ಮರುಚುನಾವಣೆ ನಡೆಯುವಂತೆ ಮಾಡಬೇಕು ಮತ್ತು ಆಗ ಯಾವೊಬ್ಬ ಅಭ್ಯರ್ಥಿಯೂ ಹತ್ತು ಲಕ್ಷದ ಮಿತಿಗಿಂತ ಹೆಚ್ಚಿಗೆ ಖರ್ಚು ಮಾಡಬಾರದ ಕಾನೂನು ಜಾರಿಯಾಗುವಂತೆ ಮಾಡಬೇಕು," ಎನ್ನುವುದು. ಇದು ಕೇವಲ ಕರ್ನಾಟಕಕ್ಕಷ್ಟೇ ಅಲ್ಲದೆ, ಇಡೀ ದೇಶದ ಕಾನೂನು ಉಲ್ಲಂಘಕ ಅನೈತಿಕ ರಾಜಕಾರಣಿಗಳಿಗೆ ಮತ್ತು ಭ್ರಷ್ಟ ವ್ಯವಸ್ಥೆಗೆ ಸ್ಪಷ್ಟ ಸಂದೇಶ ರವಾನಿಸುತ್ತದೆ ಮತ್ತು ಮೌಲ್ಯ ಮತ್ತು ನೈತಿಕತೆ ಇರುವ ಯೋಗ್ಯರು ಸಾರ್ವಜನಿಕ ಬದುಕಿಗೆ ಬರಲು ಪ್ರೇರೇಪಿಸುತ್ತದೆ. ಸದ್ಯದ ಫಲಿತಾಂಶ ಮತ್ತು ಕೇಸು ಏನೇ ಆಗಲಿ, ಅಂತಿಮ ಗುರಿ ಇದೇನೆ.
ಕಳೆದ ಎರಡು ದಿನಗಳಿಂದ ನನ್ನ ವೈಯಕ್ತಿಕ ಸರಹದ್ದಿನಲ್ಲಿ ಆಗುತ್ತಿರುವ ಘಟನೆಗಳ ರೂಪಕ ಹೀಗಿದೆ:
ನಾನದನ್ನು ಬಯಸಿರಲಿಲ್ಲ. ಆದರೆ, ಸಮಯ ಮತ್ತು ಸಂದರ್ಭ ನನ್ನ ಕೈಯ್ಯಲ್ಲಿ ರಿವಾಲ್ವರ್ ಇಟ್ಟಿದೆ. ಟ್ರಿಗರ್ ಒತ್ತಲೇಬೇಕಾದ ಅನಿವಾರ್ಯತೆಯನ್ನೂ ನಿರ್ಮಿಸಿದೆ. ಈ ರಿವಾಲ್ವರ್‍ನಲ್ಲಿ ಗುಂಡು ಇದೆಯೊ ಇಲ್ಲವೊ ನನಗೆ ಗೊತ್ತಿಲ್ಲ. ಪಿಸ್ತೂಲಿನ ಅತ್ತ ಇರುವವರಲ್ಲಿ ಕೆಲವರು ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ. ಅವರಿಗೆ ಅದರಲ್ಲಿ ಅವರಿಗಷ್ಟೆ ತಗಲುವ ಬುಲೆಟ್ ಇದೆ ಎಂಬ ಭಯ. ನಾನಂತೂ ಟ್ರಿಗರ್ ಒತ್ತುತ್ತೇನೆ. ಅದು ಪಾಲಿಗೆ ಬಂದಿರುವ ಕರ್ತವ್ಯ. ಅತ್ತ ಕಡೆಯವರೆಲ್ಲರಿಗೂ ತಗಲುವ ಗುಂಡು ಇದರಲ್ಲಿ ಇದ್ದದ್ದೇ ಆದರೆ, ಆದರ್ಶ ರಾಜಕೀಯದ ಭವಿಷ್ಯ ನಿರ್ಮಾಣದ ಹೊಸ್ತಿಲಲ್ಲಿ ನಾವಿದ್ದೇವೆ.
May 16, 2008
ಚುನಾವಣಾ ವೆಚ್ಚದ ಮಿತಿ ಎಂಬ ಅಣಕ ಮತ್ತು ಚಿಹ್ನೆ ಬದಲಾಯಿಸಿದ ಚುನಾವಣಾ ಆಯೋಗದ ಬೇಜವಬ್ದಾರಿತನ
[ಭಾರತದ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ಮತ್ತು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಯವರಿಗೆ ಕಳುಹಿಸಿರುವ ಪತ್ರ.]
ದಿನಾಂಕ: ಮೇ 15, 2008
ಗೆ:
ಮುಖ್ಯ ಚುನಾವಣಾಧಿಕಾರಿಗಳು
(ಕರ್ನಾಟಕ ರಾಜ್ಯ)
ಡಾ. ಅಂಬೇಡ್ಕರ್ ಬೀದಿ,
ಬೆಂಗಳೂರು - ೫೬೦೦೦೧
ವಿಷಯ: ಚುನಾವಣಾ ವೆಚ್ಚದ ಮಿತಿ ಎಂಬ ಅಣಕ ಮತ್ತು ಚಿಹ್ನೆ ಬದಲಾಯಿಸಿದ ಚುನಾವಣಾ ಆಯೋಗದ ಬೇಜವಬ್ದಾರಿತನ
ಮಾನ್ಯರೆ,
ರವಿ ಕೃಷ್ಣಾ ರೆಡ್ಡಿ ಎಂಬ ನಾನು, ಭಾರತದ, ಅದರಲ್ಲೂ ಮುಖ್ಯವಾಗಿ ಕರ್ನಾಟಕದ ಪ್ರಸಕ್ತ ಅನೈತಿಕ ರಾಜಕಾರಣದ ಕೆಲವು ರೀತಿನೀತಿಗಳ ವಿರುದ್ಧ ಒಂದು ನೈತಿಕವಾದ, ನ್ಯಾಯಯುತವಾದ, ಪರ್ಯಾಯ ರಾಜಕಾರಣದ ಮಾದರಿಯೊಂದನ್ನು ನಮಗೆ ನಾವೆ ಸೃಷ್ಟಿಸಿಕೊಳ್ಳಬೇಕೆಂದು ಬಯಸಿ, ಆ ನಿಟ್ಟಿನಲ್ಲಿನ ಪ್ರಯತ್ನವಾಗಿ ಬೆಂಗಳೂರಿನ ಜಯನಗರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಒಂದು ಶಾಸಕ ಸ್ಥಾನಕ್ಕೆ ಹಲವಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿರುವ ಉದಾಹರಣೆಗಳು ನಮ್ಮ ಮುಂದೆ ಹೇರಳವಾಗಿ ಇರುವಾಗ, ಅದನ್ನೆಲ್ಲ ಪ್ರತಿರೋಧಿಸಬೇಕೆಂದು ಚುನಾವಣೆ ಖರ್ಚಿಗೆ ನಾನು ಜನರಿಂದಲೆ ದೇಣಿಗೆ ಸಂಗ್ರಹಿಸಿದೆ. ರಾಗಿಗುಡ್ಡ ಜೋಪಡಿಯ ಕಾಂತಮ್ಮ ಎಂಬ 70 ವರ್ಷದ ಮುದುಕಿಯ ಬೆವರಿನ ದುಡಿಮೆಯ 10 ರೂಪಾಯಿಯಿಂದ ಹಿಡಿದು, ದೇಶವಿದೇಶಗಳಲ್ಲಿರುವ ಸುಮಾರು 105 ಭಾರತೀಯರು ಒಟ್ಟುಗೂಡಿಸಿದ ಸುಮಾರು 4,22,000 ಸಾವಿರ ರೂಪಾಯಿ ಮತ್ತು ನನ್ನ ವೈಯಕ್ತಿಕ 23000 ಸಾವಿರ ರೂಪಾಯಿಯಲ್ಲಿ ನನ್ನ ಚುನಾವಣಾ ಖರ್ಚನ್ನು ನಿಭಾಯಿಸಿದ್ದೇನೆ. ನಾವು ಮಾಡಿದ ಪ್ರತಿ ಖರ್ಚಿನ ವಿವರವನ್ನು ಆಯೋಗದ ನಿಯಮಾವಳಿ ಪ್ರಕಾರ ಪ್ರತಿ ಮೂರು ದಿನಕ್ಕೆ ಜಯನಗರ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿಗೆ ಸಲ್ಲಿಸಿದ್ದೇನೆ ಹಾಗೂ ಚುನಾವಣೆ ಮುಗಿದ ತಕ್ಷಣ ಈ ವಿವರಗಳನ್ನು ಸಾರ್ವಜನಿಕರಿಗೆ ಪತ್ರಿಕೆಗಳ ಮುಖಾಂತರ ಬಿಡುಗಡೆ ಮಾಡಿದ್ದೇನೆ. ಹಾಗಾಗಿ, ಇದನ್ನು ತಾವೂ ಗಮನಿಸಿಯೇ ಇರುತ್ತೀರ ಎಂದು ಭಾವಿಸುತ್ತೇನೆ.
ಇಲ್ಲಿ, ಈ ಮುನ್ನುಡಿಯು ಮುಖ್ಯವಾಗಲು ಮುಖ್ಯವಾದ ಕಾರಣ ಏನೆಂದರೆ, ನಮಗೆ ಜಯನಗರ ಕ್ಷೇತ್ರದ ಚುನಾವಣಾಧಿಕಾರಿಯವರ ಸಿಬ್ಬಂದಿಯವರು ಹೇಳಿದ ಪ್ರಕಾರ, ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಚುನಾವಣಾ ವೆಚ್ಚ ಮಾಡಿರುವವರು ನಾವೆ ಅಂತೆ! ಬೇರೆ ಇನ್ಯಾವುದೇ ಅಭ್ಯರ್ಥಿ ನಾಲ್ಕು ಲಕ್ಷಕ್ಕೂ ಹೆಚ್ಚಿನ ವೆಚ್ಚದ ವಿವರ ಕೊಟ್ಟಿಲ್ಲವಂತೆ! ಇದು ಹೇಗೆ ಸಾದ್ಯ ಎನ್ನುವುದೆ ನನ್ನ ಪ್ರಶ್ನೆ. ಯಾಕೆಂದರೆ, ನಾನೆ ಸ್ವತಃ ಕಂಡ ಹಾಗೆ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿ ಈ ಕ್ಷೇತ್ರದಲ್ಲಿ ನೂರಾರು ಕಾರ್ಯಕರ್ತರ ಜೊತೆ ಅನೇಕ ಸಲ ಲಿಗಳನ್ನು ನಡೆಸಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಹಾಲಿ ಸಂಸತ್‍ಸದಸ್ಯರು ಜಯನಗರ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿ ಇರುವ ಶಾಫಿಂಗ್ ಕಾಂಪ್ಲೆಕ್ಸ್ ಸುತ್ತ ಎರಡೆರಡು ಬಾರಿ ರ್‍ಯಾಲಿ ನಡೆಸಿದ್ದಕ್ಕೆ ನಾನೆ ಸಾಕ್ಷಿಯಾಗಿದ್ದೇನೆ. ಆ ಸಮಯದಲ್ಲೆಲ್ಲ ದಿನಗೂಲಿ ಸಂಬಳದ ನೂರಾರು ಕಾರ್ಯಕರ್ತರು, ಅನೇಕ ಕಾರುಗಳು, ಈ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ಅದೇ ರೀತಿ ನೂರಾರು ದಿನಗೂಲಿ ಕಾರ್ಯಕರ್ತರೊಡನೆ ಕಲ್ಯಾಣಮಂಟಪವೊಂದರಲ್ಲಿ ಅಭ್ಯರ್ಥಿಯೊಬ್ಬರು ಊಟಮಾಡುತ್ತಿದ್ದನ್ನು ನಾನೆ ಸ್ವತಃ ಕಣ್ಣಾರೆ ಕಂಡಿದ್ದೇನೆ. ಬಣ್ಣಬಣ್ಣದ, ದುಬಾರಿಯಾದ ಕರಪತ್ರಗಳನ್ನು ಮತ್ತು ಸಣ್ಣಪುಸ್ತಿಕೆಗಳನ್ನು ಹಲವಾರು ಅಭ್ಯರ್ಥಿಗಳು ತಮ್ಮ ಪ್ರಚಾರ ಸಾಮಗ್ರಿಯಾಗಿ ಕ್ಷೇತ್ರದಾದ್ಯಂತ ಹಂಚಿದ್ದಾರೆ.
ಇಷ್ಟೆಲ್ಲ ಖರ್ಚು ಮಾಡಿದರೂ, ಅವರ ಚುನಾವಣಾ ವೆಚ್ಚ ೪ ಲಕ್ಷ ದಾಟಿಲ್ಲ ಎಂದರೆ, ಇದೊಂದು ಕ್ರೂರ ಅಣಕವಲ್ಲವೆ?
ಚುನಾವಣಾ ಆಯೋಗದ ಅಧಿಕಾರಿಗಳು ಈ ಕ್ಷೇತ್ರದಲ್ಲಿ ಆದ ಚುನಾವಣಾ ಪ್ರಚಾರದ ಮೆರವಣಿಗೆಗಳ ವಿಡಿಯೊ ಚಿತ್ರೀಕರಿಸಿಲ್ಲವೆ? ಅಭ್ಯರ್ಥಿಗಳ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಮತ್ತು ಅವಕ್ಕೆ ತಗಲಬಹುದಾದ ವೆಚ್ಚವನ್ನು, ಮತ್ತು ಅಭ್ಯರ್ಥಿಗಳು ಮಾಡಬಹುದಾದ ಇನ್ನಿತರ ಖರ್ಚುವೆಚ್ಚಗಳನ್ನು ಗಮನಿಸಿಲ್ಲವೆ?
ಇವೆಲ್ಲವುಗಳನ್ನು ಸೂಕ್ಷವಾಗಿ ಗಮನಿಸಿಯಾದ ಮೇಲೆ, ಈ ಸಂದರ್ಭದಲ್ಲಿ ಚುನಾವಣಾ ಆಯೋಗ ತನ್ನ ಜವಾಬ್ದಾರಿಯನ್ನು ಸರಿಯಾಗಿ, ಕಾನೂನುಬದ್ಧವಾಗಿ ನಿರ್ವಹಿಸಿಲ್ಲ ಎಂದೆ ನಾನು ಭಾವಿಸುತ್ತೇನೆ. ಅಭ್ಯರ್ಥಿಗಳ ಖರ್ಚುವೆಚ್ಚದ ಬಗ್ಗೆ ನಿಗಾ ಇಡದೆ, ಅ ಮೂಲಕ ಚುನಾವಣಾ ಅಯೋಗ ಅಭ್ಯರ್ಥಿಗಳಿಗೆ ಮುಕ್ತ ಸಂದೇಶವೊಂದನ್ನು ರವಾನಿಸುತ್ತಿದೆ ಮತ್ತು ಆ ಸಂದೇಶ, "ನೀವು ಎಷ್ಟಾದರೂ ಖರ್ಚು ಮಾಡಿಕೊಳ್ಳಿ, ಆದರೆ ಲೆಕ್ಕ ಮಾತ್ರ 10 ಲಕ್ಷದ ಮಿತಿಯಲ್ಲೆ ತೋರಿಸಿ. ನಾವು ಯಾವುದನ್ನೂ ಪರಿಶೀಲಿಸುವುದಿಲ್ಲ. ಈ ಹತ್ತು ಲಕ್ಷದ ಮಿತಿ ಎನ್ನುವುದು ಬಾಯುಪಚಾರದ, ಕಾಗದದ ಮೇಲಿರುವ ಕಾನೂನು ಮಾತ್ರ." ಎಂಬ ಸಂದೇಶವಾಗಿದೆ ಎಂದು ನಾನು ಭಾವಿಸುತ್ತೇನೆ.
ಈ ರೀತಿಯಾಗಿ ಚುನಾವಣಾ ಆಯೋಗ ತನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿರ್ವಹಿಸುತ್ತಿಲ್ಲ ಮತ್ತು ಚುನಾವಣಾ ವೆಚ್ಚದ ಬಗೆಗಿನ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಯಾವುದೇ ವಿಶೇಷ ಪ್ರಯತ್ನ ಮಾಡುತ್ತಿಲ್ಲ ಎನ್ನುವ ಅಂಶ ನನ್ನಲ್ಲಿ ತೀವ್ರವಾದ ಕಳವಳ ಹುಟ್ಟಿಸಿದೆ. ನ್ಯಾಯಬದ್ಧವಾಗಿ, ಕಾನೂನುರೀತ್ಯವಾಗಿಯೆ ಚುನಾವಣೆ ಎದುರಿಸಬೇಕು ಎಂದುಕೊಳ್ಳುವ ಅರ್ಹರಿಗೆ ಮತ್ತು ಸತ್ಪ್ರಜೆಗಳಿಗೆ ನಿಮ್ಮಿಂದ ಸಿಗಲೇಬೇಕಾದ ನ್ಯಾಯ ಸಿಗುತ್ತಿಲ್ಲ ಎನ್ನುವುದನ್ನು ನಾನು ತೀವ್ರ ವಿಷಾದದಿಂದ ಹೇಳಬೇಕಾಗಿದೆ. ತಾವು ಈ ಕೂಡಲೆ, ಉಳಿದಿರುವ ಮೂರನೆ ಹಂತದ ಚುನಾವಣೆಯಲ್ಲಾದರೂ ಅಭ್ಯರ್ಥಿಗಳ ಮತ್ತು ಅವರ ಕಾರ್ಯಕರ್ತರ ಹಿಂದೆ ವೀಕ್ಷಕರನ್ನು ಬಿಟ್ಟು, ಅವರು ಯಾವುದೇ ರೀತಿಯಲ್ಲೂ ತಮ್ಮ ವೆಚ್ಚದ ಮಿತಿ ದಾಟದ ರೀತಿ ನೋಡಿಕೊಂಡು, ನ್ಯಾಯಬದ್ಧವಾಗಿ ನಡೆದುಕೊಳ್ಳುವ ಅಭ್ಯರ್ಥಿಗಳಿಗೆ ನಿಮ್ಮಿಂದ ಅನ್ಯಾಯವಾಗದ ರೀತಿ ನೋಡಿಕೊಳ್ಳಬೇಕೆಂದು ಈ ಸಮಯದಲ್ಲಿ ತಮ್ಮನ್ನು ಆಗ್ರಹಿಸುತ್ತೇನೆ.
ಇದೇ ಸಂದರ್ಭದಲ್ಲಿ, ನಾನು ಜಯನಗರ ಕ್ಷೇತ್ರದ ಚುನಾವಣಾಧಿಕಾರಿಗೆ ಕೊಟ್ಟಿರುವ ದೂರಿನ ಬಗ್ಗೆಯೂ ತಮ್ಮ ಗಮನ ಸೆಳೆಯ ಬಯಸುತ್ತೇನೆ. ನನಗೆ ಚುನಾವಣಾ ಆಯೋಗ ನೀಡಿದ್ದ ಚಿಹ್ನೆ "ನಗಾರಿ." ಆದರೆ, ಮತಪೆಟ್ಟಿಗೆಯ ಮೇಲಿದ್ದ ಚಿಹ್ನೆಯೆ ಬೇರೆಯದಾಗಿತ್ತು. ನಾವು ಬೀದಿನಾಟಕ ಮತ್ತು ಅದರಲ್ಲಿ ಉಪಯೋಗಿಸಿದ ನಗಾರಿಗಳಿಗಾಗಿ ಸುಮಾರು 30000 ರೂಪಾಯಿ ವೆಚ್ಚ ಮಾಡಿದ್ದೆವು. ಜಯನಗರ ಕ್ಷೇತ್ರದಲ್ಲಿ ಅವಿದ್ಯಾವಂತ ಮತದಾರರು ಹೆಚ್ಚಿಗೆ ಇರುವ ಭಾಗಗಳೆಲ್ಲೆಲ್ಲ ಬೀದಿನಾಟಕಗಳನ್ನು ಮಾಡಿ, ನಮ್ಮ ಚಿಹ್ನೆ ನಗಾರಿಯ ಬಗ್ಗೆ ಅರಿವು ಮೂಡಿಸಿದ್ದೆವು. (ಹೇಳಬೇಕೆಂದರೆ, ಕೆಲವು ತಮಿಳು ಭಾಷಿಕ ಮತದಾರರು ಈ ಚಿಹ್ನೆ ತಮಿಳುನಾಡಿನ ರಾಜಕೀಯ ಪಕ್ಷದ ಚಿಹ್ನೆ ಎಂತಲೆ ನಮಗೆ ನೆನಪಿಸುತ್ತಿದ್ದರು!) ಆದರೆ, ಮತಪೆಟ್ಟಿಗೆಯ ಮೇಲೆ ಇದ್ದ ಚಿಹ್ನೆ ಚುನಾವಣಾ ಆಯೋಗ ಅಧಿಕೃತವಾಗಿ ನೀಡಿದ್ದ ಚಿಹ್ನೆ ಅಲ್ಲವೇ ಅಲ್ಲ. ಈ ವಿಷಯವಾಗಿ ಕ್ಷೇತ್ರದ ಚುನಾವಣಾಧಿಕಾರಿಗಳು "ಅದೊಂದು ದೊಡ್ಡ ತಪ್ಪಲ್ಲ" ಎನ್ನುವಂತಹ ಮಾತನಾಡಿರುವುದಾಗಿ ಪತ್ರಿಕಾ ವರದಿಗಳು ಹೇಳುತ್ತಿವೆ. ಇಲ್ಲಿ ತಪ್ಪಾಗಿದೆ ಮತ್ತು ಅದಕ್ಕೆ ಕಾನೂನುಬದ್ಧವಾಗಿ ಯಾವಯಾವ ಕ್ರಮಗಳಿವೆ ಎನ್ನುವುದು ಮುಖ್ಯವೆ ಹೊರತು ಇದು ತಪ್ಪೇ ಅಲ್ಲ ಅಥವ ಸಣ್ಣಪ್ರಮಾಣದ ತಪ್ಪಾಗಿದೆ ಎನ್ನುವುದು ಬೇಜವಾಬ್ದಾರಿ ಹೇಳಿಕೆ ಎನ್ನುವುದು ನನ್ನ ಆಭಿಪ್ರಾಯ. ಆದಕಾರಣ, ಈ ವಿಚಾರವಾಗಿ ತಾವು ಯಾವ ಕ್ರಮ ತೆಗೆದುಕೊಂಡಿದ್ದೀರ ಮತ್ತು ನಮಗಿರುವ ಕಾನೂನಿನ ಆಯ್ಕೆಗಳೇನು ಎನ್ನುವುದನ್ನು ದಯವಿಟ್ಟು ನಮಗೆ ತಿಳಿಸಬೇಕೆಂದು ಕೋರುತ್ತೇನೆ. ನಿಮ್ಮಿಂದಲೆ ಈ ವಿವರಗಳನ್ನು ತಿಳಿದುಕೊಳ್ಳುವ ವಿಚಾರ ನನ್ನ ನ್ಯಾಯಬದ್ಧ ಹಕ್ಕುಗಳ ಮಿತಿಯೊಳಗೆಯೆ ಇದೆ ಎಂದು ನಾನು ಭಾವಿಸುತ್ತೇನೆ.
ಜಯನಗರ ಕ್ಷೇತ್ರದಲ್ಲಿ ಚುನಾವಣೆಗೆಂದು ಅತಿ ಹೆಚ್ಚು ಹಣ ವೆಚ್ಚ ಮಾಡಿದ ಅಭ್ಯರ್ಥಿ ನಾನೆ ಎಂಬ ನೈಜ ವಿವರ ಮತ್ತು ಹಾಗೆ ಖರ್ಚು ಮಾಡಲ್ಪಟ್ಟ ಹಣ ಸಾಮಾನ್ಯ ಜನರು ತಮ್ಮ ಬೆವರು ಹರಿಸಿ ದುಡಿದ ಅಮೂಲ್ಯ ಹಣ ಎಂಬ ವಾಸ್ತವ ಸಂಗತಿ ನಾನು ಈ ವಿಚಾರವಾಗಿ ತಮ್ಮಿಂದ ಉತ್ತರಗಳನ್ನು ಪಡೆಯಲು ಮತ್ತು ನ್ಯಾಯವನ್ನು ಆಗ್ರಹಿಸಲು ನೈತಿಕವಾಗಿ ಒತ್ತಾಯಿಸುತ್ತದೆ.
ವಿಶ್ವಾಸಪೂರ್ವಕವಾಗಿ,
ರವಿ ಕೃಷ್ಣಾ ರೆಡ್ಡಿ
ಸ್ವತಂತ್ರ ಅಭ್ಯರ್ಥಿ - ಜಯನಗರ ವಿಧಾನಸಭಾ ಕ್ಷೇತ್ರ
ಕರ್ನಾಟಕ
ಪ್ರತಿಗಳು: ದೆಹಲಿಯ ಮುಖ್ಯ ಚುನಾವಣಾ ಆಯುಕ್ತರಿಗೆ ಮತ್ತು ಮಾಧ್ಯಮಗಳಿಗೆ
Cruel Joke of Election Expenditure Limit and Distortion of Poll Symbol by EC
[The letter that was sent to CEC of India and CEO of Karnataka]
Date: May 15, 2008
To:
Chief Electoral Officer
(Karnataka State)
DPAR (Elections), Old KGID Building Annexe
Dr. B R Ambedkar Veedhi
Bangalore – 560 001.
Subject: Cruel Joke of Election Expenditure Limit and Distortion of Poll Symbol by Election Commission
Dear Sir,
I, Ravi Krishna Reddy, have contested from Jayanagar Constituency as an Independent Candidate to protest against the immoral, unethical political practices and money power in Karnataka's democracy. This contest was meant to showcase an Alternative Politics, which is legal, ethical and value based. When there are innumerable examples of MLA candidates spending crores of Rupees for just an assembly election, I was convinced that the only way to fight these illegal and unethical practices was by public participation and fighting the election with public funding. I have raised Rs. 4,22,000 (approx) from the public, starting from Rs. 10 donated by a 70 year old, poor elderly woman of Ragigudda Jopadi, to 105 other Indian donors from all across the world. To this I have added my own money of Rs. 23000 and we have spent Rs. 4,45,291 for the election. Hope you too have noticed this as this information was made public as soon as the election was over.
My above preamble is relevant because I am told by the Jayanagar constituency's Returning Office officials that I am the only candidate who has spent more than 4 lakh rupees in this constituency! According to them, all the other candidates have "shown" their expenses to be less than 4 lakhs! I ask in wonder: how is this possible? Because, I have seen rallies taken out by political parties in this constituency, with hundreds of workers, on multiple occasions. On two occasions, I myself witnessed rallies at Jayanagar Shopping Complex in which the current MP waving at the public from the rooftop of a van. Hundreds of daily-wage workers, many 4 wheelers, and innumerable motor bikes were all part of this procession. I was also present in the same premises when a candidate was having his lunch with hundreds of poor, daily-wage workers inside a big
Marriage Hall. Special, colorful, expensive handbills and booklets were distributed by the candidates all across the constituency.
Isn't it a cruel joke to say that even after all these expenses they have spent less than 4 lakhs?
Hasn't the EC officials taken videos of these processions and noticed the publicity materials of the candidates and its worth?
After noticing all this, I strongly believe that the Election Commission has not fulfilled its duty responsibly and legally. Without keeping a tab on candidate's expenses, I believe EC has sent an open message to all the candidates across the country and that message is: "Spend as much as you want, but let your expense returns be within 10 lakhs. We do not verify any details. The ceiling of 10 lakhs is just on paper and is of no significance whatsoever."
I am concerned that the EC is not taking any measures to enforce the expenditure limits and this legal limit is a farce. I have to say with deep regrets that EC is not doing any justice to law abiding citizens of India, who want to contest the elections, rightfully and legally. At this moment, at least for the third phase of elections, I strongly urge you to deploy observers behind candidates and their workers to make sure that they won't cross the expenditure ceiling, and thereby provide justice to the candidates who respect and abide by the law.
Along with this, I also would like to draw your attention towards the complaint that I have lodged with the RO of Jayanagar constituency. The EC allotted "Nagara" as my poll symbol. But, the symbol that was printed on the ballot box of EVM was something else. We spent almost Rs. 30000 for street plays and the display of actual Nagaras. We organized these street plays in the constituency primarily where low-income, uneducated voters are in large numbers. (As a matter of fact, some of the Tamil speaking voters were constantly reminding us that 'Nagara' is the symbol of one of the Tamilnadu's Political Party.) But, on the day of the election, the symbol that was on the ballot box was something other than the official 'Nagara' symbol. Some news reports reported that the RO says, "it is not a major blunder." I strongly protest against this kind of statements and believe this is a not a responsible statement. This was an error and the RO should have considered what does law says for such a situation, instead of opining whether it is a major or minor blunder. So, hereby I request you to kindly let me know what measures you have taken. Otherwise, I may have to consider exploring my legal options. Before I take that extreme measure, I believe getting these details and being educated by you regarding my choices are within my rights.
The fact that I was the candidate who has spent the maximum amount of money in this constituency and this campaign was run by the hard earned money of ordinary people compels me morally to demand answers and seek justice.
Sincerely,
Ravi Krishna Reddy
Independent Candidate,
Jayanagar Assembly Constituency
Karnataka
www.ravikrishnareddy.com